ಇಂಡಾಲ್ ಅಲ್ಯುಮಿಮಿಯಮ್ ಕಂಪನಿ ಲಿಮಿಟೆಡ್ (ಇಂಡಾಲ್)

 

 

ಈ ಕಂಪನಿಯು 1938 ರಲ್ಲಿ ಸ್ಥಾಪನೆಯಾಗಿದ್ದು, ಬೆಳಗಾವಿ ನಗರದಿಂದ ಸುಮಾರು 7 ಕೀ.ಮೀ. ಅಂತರದಲ್ಲಿದೆ. 1944 ರಲ್ಲಿ ಈ ಕಂಪನಿಯ ಹೆಸರನ್ನು ಇಂಡಿಯನ್ ಅಲ್ಯುಮಿನಿಯಮ್ ಕಂಪನಿ ಎಂದು ಬದಲಿಸಲಾಯಿತು ಹಾಗೂ 1945 ರಲ್ಲಿ ಇದು ಪಬ್ಲಿಕ್ ಲಿಮಿಟೆಡ್ ಅಲ್ಯುಮಿನಿಯಮ್ ಕಂಪನಿ, ನಿಯಮಿತ (ಇಂಡಾಲ್) ಎಂದು ಪರಿವರ್ತನೆಗೊಂಡಿತು. ಈ ಕಂಪನಿಯು ಸುಮಾರು 6 ದಶಕಗಳಿಂದ ಆದಿತ್ಯ ಬಿರ್ಲಾ ಗ್ರೂಪ್ ಕಂಪನಿಯ ಒಂದು ಭಾಗವಾಗಿದ್ದು, ಇದರೊಂದಿಗೆ ಸೇರಿ ಈ ಕಂಪನಿಯು ಸುಮಾರು 96% ಇಕ್ವಿಟಿ ಶೇರುಗಳನ್ನು ಹೊಂದಿದ ಅಲ್ಲದೆ ದೇಶದಲ್ಲಿನ ಅತೀ ದೊಡ್ಡ ಉದ್ಯಮದಲ್ಲಿ ಇದು ಕೂಡ ಒಂದಾಗಿದೆ. ಅಲ್ಯುಮಿನಿಯಂ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿ ಇಂಡಾಲ್ ಮುಂಚೂಣಿಯಲ್ಲಿದೆ. ಈ ಕಂಪನಿಯು ಅಲ್ಯುಮಿನಿಯ ಹಾಗೂ ಹೈಡ್ರೇಟ್ಸ್ ಆಫ್ ಅಲ್ಯುಮಿನಿಯಂ ಮತ್ತು ಪ್ರೈಮರಿ ಅಲ್ಯುಮಿನಿಯಂ ಮೆಟಲ್ ಗಳನ್ನು ಉತ್ಪಾದಿಸುತ್ತದೆ. ಇತ್ತೀಚಿಗೆ ಆದಿತ್ಯ ಬಿರ್ಲಾ ಗ್ರೂಪ್ ಕಂಪನಿಯು ಈ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಈ ಕಂಪನಿಯನ್ನು ಹಿಂಡಾಲ್ಕೋ (ಇಂಡಾಲ್) ಎಂದು ಬದಲಿಸಲಾಗಿದೆ. ಈ ಕಂಪನಿಯು ಬಾಕ್ಸೈಟ್ ಮೈನ್ ಹಾಗೂ ಪಾವರ್ ಪ್ಲಾಂಟ್‍ಗಳಿಗಾಗಿ ಐಎಸ್ಒ 140001 ಪರಿಸರ ನಿರ್ವಹಣಾ ವ್ಯವಸ್ಥೆ ಪ್ರಮಾಣಪತ್ರ (ಸರ್ಟಿಫೀಕೇಟ್) ಪಡೆದಿರುವ ಏಷ್ಯಾದಲ್ಲಿನ ¨ಪ್ರಪ್ರಥಮ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಲವು ಇಂಡಾಲ್ ಕಂಪನಿಗಳ ಶಾಖೆಗಳು ಇಂಧನ ಕ್ಷಮತೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿವೆ.
ಹಿಂಡಾಲ್ಕೊ ಮತ್ತು ಇಂಡಾಲ್ ಈ ಎರಡೂ ಕಂಪನಿ ಸೇರಿ ಆದಿತ್ಯ ಬಿರ್ಲಾ ಗ್ರೂಪ್‍ನ ಕಾಪ್‍ರ್ ವಿಭಾಗದ ಒಂದು ಭಾಗವಾಗಿ ಸೇರ್ಪಡೆ ಹೊಂದಿದ್ದು, ವಿಶ್ವಮಟ್ಟದಲ್ಲಿ ಹಾಗೂ ಈ ಉದ್ದಿಮೆಯು ದೇಶಾದ್ಯಂತ ತನ್ನ ವಿಭಾಗಗಳನ್ನು, ಗಣಿಗಾರಿಕೆಯನ್ನು ಹಾಗೂ ಕಚೇರಿಗಳನ್ನು ಹೊಂದಿರುವುದರಿಂದ ದೇಶ ಹಾಗೂ ಹೊರದೇಶದಲ್ಲಿ ಮಾರುಕಟ್ಟೆಯನ್ನು ಹೊಂದಲು ಸಾಧ್ಯವಾಗಿದೆ. ಇಂಡಾಲ್ ಕಂಪನಿಯು ಎಲ್ಲ ರೀತಿಯ ಅಲುಮಿನಿಯಮ್ ಉತ್ಪನ್ನಗಳ ಸಂಯುಕ್ತ ಉದ್ಯಮವಾಗಿ ಮಾರ್ಪಟ್ಟಿದೆ. ISO 9001 & 140001 ಇವರಿಂದ ಗುಣಮಟ್ಟ ಹಾಗೂ ಪರಿಸರ ನಿರ್ವಹಣೆಗೆ ಪ್ರಮಾಣೀಕರಿಸಲ್ಪಟ್ಟಿದೆ. ಅಲ್ಲದೇ ರಾಸಾಯನಿಕ ಹಾಗೂ ಮೌಲಾಧ್ಯಾರಿತ ಉತ್ಪನ್ನಗಳಾದ ಅಲ್ಯುಮಿನಿಯಮ್ ಹಾಳೆಗಳನ್ನು, ವಿವಿಧ ಉತ್ಪನ್ನಗಳನ್ನು ಫಾಯಿಲ್ ಗಳನ್ನು ಉತ್ಪಾದಿಸುವಲ್ಲಿ ದೇಶದ ಉದ್ದಿಮೆಗಳಲ್ಲಿಯೇ ಉನ್ನತ ಸ್ಥಾನವನ್ನು ಅಂಲಕರಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಬೆಳಗಾವಿ ವರ್ಕ್ಸ
ಯಮನಾಪುರ, ಬೆಳಗಾವಿ - 590010
ದೂ. ಸಂ – 0831-2472716, ಫ್ಯಾಕ್ಸ್ – 0831-2472728
ಬೆಳಗಾವಿ ಆರ್ & ಡಿ. ಸೆಂಟರ್
ಯಮನಾಪುರ, ಬೆಳಗಾವಿ - 590010
ದೂ.ಸಂ-0831-2472738 ಫ್ಯಾಕ್ಸ್ -0831-2472738

Best Viewed in latest version of firefox,chrome, Internet Explorer 9 or above with resolution 1024x768.