ಬೆಳಗಾವಿ ಕ್ಯಾನ್ಸರ್ ಆಸ್ಪತ್ರೆ:

 

 

ಕ್ಯಾನ್ಸರ ಆಸ್ಪತ್ರೆಯು ಎತ್ತರದ ಪ್ರದೇಶದ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದು ಬೆಳಗಾವಿ ಕೋಟೆಯ ಎದುರಿನಲ್ಲಿರುವ ಕೋಟೆಕೆರೆಯ ಹಿಂಭಾಗದಲ್ಲಿದೆ. ಈ ತರಹದ ಆರೋಗ್ಯ  ಸಂಸ್ಥೆ ಬೆಳಗಾವಿ ನಗರದ ವಿಶೇಷತೆಯಾಗಿದೆ. ಈ ಆಸ್ಪತ್ರೆಯಲ್ಲಿ ಗಾಳಿ ಹಾಗೂ ಬೆಳಕಿನ ವಿಶೇಷ ವ್ಯೆವಸ್ಥೆಯಿದ್ದು ಇದರಿಂದಾಗಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ರೋಗ ಮುಕ್ತಗೊಳ್ಳಲು ಅನುಕೂಲಕರವಾಗಿದೆ ಈ ಆಸ್ಪತ್ರಯು ಕೇಂದ್ರ ಬಸ್ ನಿಲ್ದಾಣದಿಂದ 1.5 ಕೀ.ಮೀ. ಅಂತರದಲ್ಲಿದ್ದು ವಾಹನ ನಿಲುಗಡೆಗೆ ವ್ಯೆವಸ್ಥಿತ ಸೌಕರ್ಯವನ್ನು ಕಲ್ಪಿಸಿದೆ.

ಆಸ್ಪತ್ರೆಯು 40 ಹಾಸಿಗೆಯ ಸಾಮರ್ಥ್ಯ ಹೊಂದಿದ್ದು, ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಕೊಠಡಿ ಹಾಗೂ ಐ.ಸಿ.ಯು. ವನ್ನು ಒಳಗೊಂಡಿದೆ. ಆಸ್ಪತ್ರೆಯಲ್ಲಿ ರಕ್ತ ಪರೀಕ್ಷಾ ಪ್ರಯೋಗಾಲಯ, ಎಕ್ಸರೇ, ಎಂಡೊಸ್ಕೋಪಿ ಹಾಗೂ ಅಲ್ಟ್ರಾ ಸೊನೋಗ್ರಾಪಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಆಸ್ಪತ್ರೆಯಲ್ಲಿ ಅಂತಿಮ ಹಂತದಲ್ಲಿರುವ ರೋಗಿಗಳಿಗೆ ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ಪಥವನ್ನು ನಿರ್ಮಿಸಲಾಗಿದ್ದು, ಇದರಿಂದಾಗಿ ಇನ್ನುಳಿದ ರೋಗಿಗಳಿಗೆ ಕುಟುಂಬ ಸದಸ್ಯರುಗಳು ಹಾಗೂ ಇತರರಿಗೆ ಯಾವದೇ ಬಾಧ್ಯತೆ ಉಂಟಾಗದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಆಸ್ಪತ್ರೆಯು ಶಸ್ತ್ರ ಚಿಕಿತ್ಸಾ ವಿಭಾಗ, ಗ್ರಂಥಿ ವಿಜ್ಞಾನ ವಿಭಾಗ, ವಿಕಿರಣ ಚಿಕಿತ್ಸಾ ವಿಭಾಗ, ವೈದ್ಯಕೀಯ ಗ್ರಂಥಿ ವಿಭಾಗ ಹಾಗೂ ಟೆಲಿ ಮೆಡಿಸಿನ್ ವಿಭಾಗಗಳನ್ನು ಒಳಗೊಂಡಿದೆ. ಈ ಆಸ್ಪತ್ರೆಯ ಸೌಲಭ್ಯದಿಂದಾಗಿ ನೂರಾರು ಕಿ.ಮೀ. ದೂರದ ಆಸ್ಪತ್ರೆಗೆ ಈ ಭಾಗದ ರೋಗಿಗಳು ಪ್ರಯಾಣಿಸುವದರಿಂದ ಮುಕ್ತಗೊಂಡಿರುತ್ತಾರೆ.

Best Viewed in latest version of firefox,chrome, Internet Explorer 9 or above with resolution 1024x768.