ಇತರೆ ಕೈಗಾರಿಕೆಗಳು

 

ಗೋಕಾಕ ಮಿಲ್ಸ್ (ಗೋಕಾಕ) - ಇದು 1885 ರಲ್ಲಿ ಸ್ಥಾಪನೆಯಾಗಿದ್ದು, ಗೋಕಾಕ ನಿಂದ 6 ಕೀ.ಮೀ. ಅಂತರದಲ್ಲಿದೆ. ಇಲ್ಲಿ ಕಚ್ಚಾ ಹತ್ತಿಯನ್ನು ನೂಲು ಅಥವಾ ದಾರ ರೂಪದಲ್ಲಿ ಪರಿವರ್ತಿಸಲಾಗುತ್ತಿದೆ. ಇಲ್ಲಿ ಹತ್ತಿಯಿಂದ ನೂಲು ಎಲೆ ದಾರ, ಹಗ್ಗ, ಕ್ಯಾನವಾಸ್, ಇನ್ನಿತರೆ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ.

ಉಗಾರ ಶುಗರ್ ವರ್ಕ್ಸ : ಈ ಉದ್ಯಮವು 1939 ರಲ್ಲಿ ಅಥಣಿ ತಾಲ್ಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಸ್ಥಾಪನೆಗೊಂಡಿದೆ. ಈ ಕಂಪನಿಯಲ್ಲಿ ಸಕ್ಕರೆ ಹಾಗೂ ಅಲ್ಕೋಹಾಲ್ ಉತ್ಪಾದಿಸುತ್ತಿದ್ದು, ಇವು ಈ ಕಂಪನಿಯ ಪ್ರಮುಖ ಉತ್ಪಾದನೆಯಾಗಿದೆ.

ಬೆಮ್ಕೋ ಹೈಡ್ರಾಲಿಕ್ಸ್ (ಬೆಳಗಾವಿ) - ಹೆಡ್ರಾಲಿಕ್ಸ್ ಪ್ರೈವೇಟ್ ಲಿ. - 1957 ಬೆಳಗಾವಿಯಲ್ಲಿ ಇದು ಸ್ಥಾಪನೆಗೊಂಡು , ಬೆಮ್ಕೋ ಹೈಡ್ರೋಲಿಕ್ಸ್ ಕಂಪನಿ ಅಂತಾ ಸಂಘಟಿತಗೊಂಡು ಹೈಡ್ರೋಲಿಕ್ಸ್ ಪ್ರೆಸ್‍ಸ್ ಮತ್ತು ಸಾಧನ-ಸಲಕರಣೆಗಳ ಉತ್ಪಾದನೆ ಹಾಗೂ ಮಾರಾಟ ಮಾಡುತ್ತದೆ. ಈ ಪಾಲುದಾರಿಕೆಯು 1976 ರಲ್ಲಿ ಸಾರ್ವಜನಿಕ ನಿಯಮಿತ ಕಂಪನಿಯಾಗಿ ಪರಿವರ್ತಿತಗೊಂಡಿದೆ. ( Public Ltd. Co.)


ಅರುಣ ಇಂಜಿನಿಯರಿಂಗ್ ವರ್ಕ್ಸ (ಬೆಳಗಾವಿ) - ಈ ಉದ್ಯಮವು ಪಾಲುದಾರಿಕೆ ಸಂಸ್ಥೆಯಾಗಿದ್ದು, 1960 ರಲ್ಲಿ ಉದ್ಯಮಬಾಗ, ಬೆಳಗಾವಿ ಇಲ್ಲಿ ಸ್ಥಾಪನೆಗೊಂಡಿದೆ. ಇಲ್ಲಿ ಕ್ರ್ಯಾಂಕ್ ಷಾಫ್ಟ, ರೋಟಾರ್ಸ್ ಇತ್ಯಾದಿ ವಸ್ತುಗಳ ಸಂಸ್ಕರಣೆ ಹಾಗೂ ಉತ್ಪಾದನೆ ಮಾಡಲಾಗುತ್ತದೆ. ಅಲ್ಲದೇ ಹೈಡ್ರೋಲಿಕ್ಸ್ ಜಾಕ್ಸ್ ಮತ್ತು ಹೈಡ್ರೋಲಿಕ್ಸ್ ಪ್ರೆಸ್‍ಸ್ ನಂತಹ ಉತ್ಪನ್ನಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.

ಮಲಪ್ರಭಾ ಕೋ-ಆಪ್‍ರೇಟಿವ್ ಶುಗರ್ ಫ್ಯಾಕ್ಟರಿ (ಹುಬ್ಬಳ್ಳಿ-ಬೆಳಗಾವಿ) - ಮುಗಟ್ ಖಾನ್, ಹುಬ್ಬಳ್ಳಿಯಲ್ಲಿ ಇರುವ ಇದು ಒಂದು ಸಕ್ಕರೆ (ಕಾರ್ಖಾನೆ) ಉದ್ಯಮವಾಗಿದ್ದು, ಇದು 1961 ರಲ್ಲಿ ಸ್ಥಾಪನೆಗೊಂಡಿದೆ. ಇಲ್ಲಿ ಸಕ್ಕರೆ ಉತ್ಪಾದನೆ ಹಾಗೂ ಸಕ್ಕರೆ ಸಂಬಧಿತ ಇತರೆ ಮೈತ್ರಿ ಉತ್ಪನ್ನಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಅಲ್ಲದೆ ಇದು ಸುಮಾರು 1200 ಜನರಿಗೆ ಇಲ್ಲಿ ಉದ್ಯೋಗವನ್ನು ಒದಗಿಸಿದೆ. ಈ ಉದ್ಯಮದ ಉತ್ಪನ್ನ ಸಾಮರ್ಥ್ಯ 3500 ಎಂ.ಟಿ. ನಷ್ಟು ಇರುತ್ತದೆ.

ನ್ಯಾಷನಲ್ ಇನ್ಸ್‍ಟಿಟ್ಯಾಟ್ ಆಪ್ ಹೈಡ್ರೋಲಾಜಿ (ಬೆಳಗಾವಿ ) - ಈ ಸಂಸ್ಥೆಯು 1978 ರಲ್ಲಿ ಬೆಳಗಾವಿಯಲ್ಲಿ ಸ್ಥಾಪನೆಯಾಗಿದ್ದು, ಇದರ ಕೇಂದ್ರ ಕಚೇರಿ ಉತ್ತರಾಂಚಲದ ರೂರ್ಕಿಯಲ್ಲಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶವೆಂದರೆ ಹೈಡ್ರೋಲಾಜಿಯಲ್ಲಿ (ಜಲಶಾಸ್ತ್ರದಲ್ಲಿನ) ಎಲ್ಲಾ ಅಂಶಗಳನ್ನು ವ್ಯವಸ್ಥಿತ ಹಾಗೂ ವೈಜ್ಞಾನಿಕ ಸಂಶೋಧನೆ ಮಾಡುವುದಾಗಿದೆ. ದೇಶ-ವಿದೇಶದಲ್ಲಿನ ಹೈಡ್ರೋಲಾಜಿಯಲ್ಲಿನ ನಿರ್ದಿಷ್ಟ ಜಲ ಸಮಸ್ಯೆಗಳನ್ನು, ತೊಂದರೆಗಳನ್ನು ತಿಳಿದುಕೊಳ್ಳುವ ಸಂಬಂಧವಾಗಿ ಮೊಟ್ಟಮೊದಲ ಅಧ್ಯಯನ ಕೇಂದ್ರ ಬೆಳಗಾವಿಯಲ್ಲಿ ಸ್ಥಾಪನೆಗೊಂಡಿತು. ಇತರೆ ಕೇಂದ್ರಗಳು ಗೌಹಾಟಿ, ಕಾಕಿನಾಡ, ಪಾಟ್ನಾ ಇಲ್ಲಿ ಸ್ಥಾಪಿತಗೊಂಡಿವೆ.
ಪ್ರಸ್ತುತ ಹಾರ್ಡ್ ರಾಕ್ ರಿಜಿನಲ್ ಸೆಂಟರ್ ಇಲ್ಲಿ 7 ಜನ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದು, ಮಣ್ಣು ತಪಾಸಣೆ ಹಾಗೂ ನೀರಿನ ಗುಣಮಟ್ಟದ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ಅಲ್ಲದೆ ಇಲ್ಲಿ ಹವಾಮಾನ ನಿಯಂತ್ರಿಕ ಕೇಂದ್ರಗಳ ಮೇಲ್ವಿಚಾರಣಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಿ.ಟಿ.ಪಿ. ಸಿ ಎನ್.ಸಿ. : ಈ ಉದ್ಯಮವು ಎಲ್ಲ ರೀತಿಯ ರಿಟೆನ್‍ಶೆನ್ ನಾಬ್ (ಪುಲ್ ಸ್ಟಡ್ಸ್) ತಯಾರಿಸುವ ಉದ್ಯಮವಾಗಿರುತ್ತದೆ. ಈ ಉದ್ಯಮವು ಸಾಮಾನ್ಯವಾಗಿ ಹೆಚ್ಚನ ಪ್ರಮಾಣದ ಸಂಗ್ರಹವನ್ನು ಹೊಂದಿದ್ದು, ಭಾರತದಾದ್ಯಂತ ಉದ್ದಿಮೆಗಳ ಸಂಪರ್ಕ ಜಾಲವನ್ನು ಹೊಂಇದ್ದು, ಉದ್ಯಮ ಪಾಲುದಾರರನ್ನು ಹೊಂದಿರುತ್ತದೆ. ಸಂಸ್ಥೆಯು ನವೀನ ಮಾದರಿಯ ತಂತ್ರಜ್ಞಾನದ ಅಭಿವೃದ್ದಿ ಮತ್ತು ಸೃಜನೆ ವಿಭಾಗವನ್ನು ಹೊಂದಿದ್ದು, ಈ ವಿಭಾಗವನ್ನು ತಾಂತ್ರಕ ಕೌಶಲ್ಯ ಹೊಂದಿದ ಕಾರ್ಯಕಾರಿ ನಿರ್ದೇಶಕರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಸಂಸ್ಥೆಯು ಶ್ರೇಷ್ಟ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಗುರಿಯನ್ನು ಪರಿಣಾಮಕಾರಿಯಾದ ನೀತಿ ಅನುಷ್ಟಾನದ ಮೂಲಕ ಸಾಧಿಸುತ್ತಿದೆ.
ಸಂಸ್ಥೆಯ ಪ್ರಮುಖ ಉತ್ಪಾದನೆಗಳಲ್ಲಿ ಟೂಲ್ ಹೋಲ್ಡರ್, ಸೈಡ್ ಲಾಕ್, ಅಡಾಪ್ಟರ್ ಫಾರ್ ಮಿಲ್ಲಿಂಗ್ ಕಟರ್ಸ್, ಮತ್ತು ವೈಬ್ರೇಶನ್ ಸಿಸ್ಟಮ್ ಇತ್ಯಾದಿ ಹಲವಾರು ಉತ್ಪನ್ನಗಳು ಒಳಗೊಂಡಿವೆ.

Best Viewed in latest version of firefox,chrome, Internet Explorer 9 or above with resolution 1024x768.