ಪಾಲಿಹೈಡ್ರೋನ್ ಪ್ರೈವೇಟ್ ಲಿಮಿಟೆಡ್ (ಬೆಳಗಾವಿ)

 

ಇದು ಒಂದು ಪಾಲಿಹೈಡ್ರೋನ್ ಗ್ರೂಪ್ ಅವರ ಫ್ಲ್ಯಾಗ್‍ಶಿಪ್ ಕಂಪನಿ ಆಗಿರುತ್ತದೆ. ಬೆಳಗಾವಿ ಜಿಲ್ಲೆಯಲ್ಲಿನ ಉದ್ಯಮಗಳ ಪೈಕಿ ಇದು ಒಂದು ಅತ್ಯುತ್ತಮ ಉದ್ಯಮ ಆಗಿರುತ್ತದೆ. ಈ ಉದ್ಯಮವು ಸೈದ್ಧಾಂತಿಕ ನಿರ್ವಹಣೆಗಾಗಿ ಗುರುತಿಸಲ್ಪಟ್ಟಿದೆ. ಈ ಉದ್ಯಮದೊಂದಿಗೆ ಸಂಪರ್ಕ ಬೆಳೆಸಲು ಮತ್ತು ಅಲ್ಲಿನ ವ್ಯವಸ್ಥೆಯನ್ನು ತಿಳಿದುಕೊಳ್ಳುವ ಸಲುವಾಗಿ ದೇಶಾದ್ಯಂತ ಜನ ಈ ಉದ್ಯಮಕ್ಕೆ ಭೇಟಿ ನೀಡುತ್ತಾರೆ. ಈ ಕಾರಣದೊಂದಿಗೆ ಇದು ಭಾರತದ ಉದ್ಯಮವಲಯದಲ್ಲಿನ ಒಂದು ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಟ್ಟಿದೆ. 1974 ರಲ್ಲಿ ಶ್ರೀ ಎಸ್. ಬಿ. ಹುಂದ್ರೆ, ಶ್ರೀ ವಿ. ಕೆ. ಸಾಮಂತ ಮತ್ತು ಶ್ರೀ ಡಿ.ಎಸ್.ಚಿಟ್ನಿಸ್ ಎಂಬ ಯುವ ಉದಯೋನ್ಮುಖ ಉದ್ಯಮಿಗಳು ಈ ಕಂಪನಿಯನ್ನು ಹೈಲೊಕ್ ಪಾಲಿಡ್ರಾನ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನೊಂದಿಗೆ ಈ ಕಂಪನಿಯನ್ನು ಪ್ರಾರಂಭಿಸಿದರು. ಕ್ರಮವಾಗಿ 1982 ಮತ್ತು 1986 ರಲ್ಲಿ ಪಾಲಿಹೈಡ್ರೋನ್ ಪ್ರೈವೇಟ್ ಲಿಮಿಟೆಡ್ ಮತ್ತು ಪಾಲಿಹೈಡ್ರೋನ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್ ಎಂದು ಕ್ರಮವಾಗಿ ಪ್ರಾರಂಭಿಸಿದರು. ಪ್ರಸ್ತುತ ಈ ಕಂಪನಿಯು ಆಯಿಲ್ ಗೇರ್ ಟಾವಲರ್ ಪಾಲಿಹೈಡ್ರೋನ್ ಪ್ರೈವೇಟ್ ಲಿಮಿಟೆಡ್ ಎಂದು ಗುರುತಿಸಲ್ಪಟ್ಟಿದೆ. ಈ ಕಂಪನಿಯು ಶೇಕಡ 32.05% ಸಂಯುಕ್ತ ಅಭಿವೃದ್ಧಿ ನಿರ್ವಹಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ಕಂಪನಿಯು 9 ಕೋಟಿ ವ್ಯವಹಾರ ಮಾಡಿದ್ದು, 72 ಜನ ಉದ್ಯೋಗಿಗಳನ್ನು ಹೊಂದಿರುತ್ತದೆ. ಈ ಕಂಪನಿಯು ಹೈಡ್ರೋಲಿಕ್ ರೇಡಿಯಲ್ ಪಂಪ್ಸ್, ವಾಲ್ವ್ಸ್ ಮತ್ತು ಇತರೆ ಉಪಕರಣಗಳನ್ನು ತಯಾರಿಸುತ್ತದೆ. ಕಳೆದ 15 ವರ್ಷಗಳಿಂದ ಈ ಕಂಪನಿಯು ಭಾರತದಾದ್ಯಂತ ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ಸಾಮಗ್ರಿಗಳ ಪರಿಣಾಮಕಾರಿಯಾದ ಸಂಗ್ರಹವನ್ನು ಹೊಂದಿರುತ್ತದೆ. ನಿಗದಿತ ಅವಧಿಯಲ್ಲಿ ಉತ್ಪನ್ನಗಳನ್ನು ತಯಾರಿಸಿ ಸೂಕ್ಷ್ಮ ರೀತಿಯ ಅನುಷ್ಟಾನ ಹಾಗೂ ಸಮರ್ಥವಾದ ನೀತಿ ನಿರೂಪಣೆಯನ್ನು ನಿರ್ವಹಿಸಿಕೊಂಡು ಬರಲಾಗಿದೆ. ಕಳೆದ 15 ವರ್ಷಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಬೆಲೆಗಳಲ್ಲಿ ಏರಿಕೆಯನ್ನು ಮಾಡಿದ್ದು, ಈ ಕಂಪನಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸ್ಪರ್ದಾತ್ಮಕ ದರದಲ್ಲಿ ಲಭ್ಯವಾಗುತ್ತಿವೆ. ಅಲ್ಲದೆ ಈ ಉದ್ಯಮವು ಪಂಪ್ಸ್, ಪ್ರೆಸರ್ ಕಂಟ್ರೋಲ್ ವಾಲ್ವ್ಸ್ , ಫ್ಲೋ ಕಂಟ್ರೋಲ್ ವಾಲ್ವ್ಸ್ , ಮೊಬೈಲ್ ವಾಲ್ವ್ಸ್ ಹಾಗೂ ತತ್ಸಂಬಧಿತ ಇನ್ನಿತರೆ ಉಪಕರಣಗಳನ್ನು ತಯಾರಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಪಾಲಿಹೈಡ್ರೋನ್ ಪ್ರೈವೇಟ್ ಲಿಮಿಟೆಡ್
ಮಚ್ಛೆ ಇಂಡಸ್ಟ್ರಿಯಲ್ ಎಸ್ಟೇಟ್, ಮಚ್ಛೆ,
ಬೆಳಗಾವಿ - 590014
ದೂ. ಸಂ: 0831-2411001.
ಫ್ಯಾಕ್ಸ:: + 91-(0)831-2411 002
ವಿ.ಅಂಚೆ: polyhydron[at]vsnl[dot]com
ವೆಬ್ಸೈಟ್: www[dot]polyhydron[dot]com

Best Viewed in latest version of firefox,chrome, Internet Explorer 9 or above with resolution 1024x768.