ತಾಂತ್ರಿಕ ಶಿಕ್ಷಣ:

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

gssbca

 

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಧಾನ ಕಚೇರಿ ಬೆಳಗಾವಿಯಲ್ಲಿದ್ದು, ನಾಲ್ಕು ಪ್ರಾದೇಶಿಕ ಕಛೇರಿಗಳು ಬೆಂಗಳೂರು, ಮೈಸೂರು, ಗುಲ್ಬರ್ಗ ಮತ್ತು ಬೆಳಗಾವಿಯಲ್ಲಿದೆ. ಮತ್ತು ಕರ್ನಾಟಕ ರಾಜ್ಯದ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯಗಳ ಸಂಲಗ್ನತೆ ಒಳಗೊಂಡಿದೆ.


ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ , ಪ್ರಾದೇಶಿಕ ಕೇಂದ್ರ ಬೆಳಗಾವಿ ,
ಜ್ಞಾನಸಂಗಮ ಮಾಚೇ, ಬೆಳಗಾವಿ – 590 018.
ದೊ.ಸಂ:: 0831-2498196,
ಫ್ಯಾಕ್ಸ:08312498197,
ವಿ.ಅಂಚೆ: vtubelgaum[at]vtu[dot]ac[dot]in
ವೆಬ್ಸೈಟ್: http://www[dot]vtu[dot]ac[dot]in

ಕೆ.ಎಲ್.ಇ. ಸೊಸೈಟಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಬೆಳಗಾವಿ) (ಬಿ.ಸಿ.ಎ) -

 

ಈ ಕೋರ್ಸ್ 1999 ರಲ್ಲಿ ಆರ್.ಎಲ್.ಎಸ್. ಕಾಲೇಜ್‍ನಲ್ಲಿ ಡಿಗ್ರಿ ಹಂತದಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುವ ಸಂಬಂಧವಾಗಿ ಮೊದಲಬಾರಿಗೆ ಶುರುವಾಯಿತು. ಈ ಕಾಲೇಜು ಕರ್ನಾಟಕ ಹಾಗೂ ಧಾರವಾಡ ಯುನಿವರ್ಸಿಟಿಗಳ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಸುಸಜ್ಜಿತ ಗ್ರಂಥಾಲಯ, 50 ಕ್ಕಿಂತ ಹೆಚ್ಚು ಕಂಪ್ಯೂಟರ್ ಹಾಗೂ ಇಂಟರ್‍ನೆಟ್ ಸೌಲಭ್ಯ ಹೊಂದಿರುವ ಕಂಪ್ಯೂಟರ್ ಗ್ರಂಥಾಲಯ. ಹಾಸ್ಟೆಲ್, ಸುಸಜ್ಜಿತ ಶಿಕ್ಷಣ ಕೊಠಡಿಗಳು, ಹಾಗೂ ಉನ್ನತ ಶಿಕ್ಷಣ ಹೊಂದಿರುವ ಸಿಬ್ಬಂದಿಯನ್ನು ಹೊಂದಿದೆ. ವಾಣಿಜ್ಯ ಮತ್ತು ವಿಜ್ಞಾನ ವಿಷಯದಲ್ಲಿ ಪಿ.ಯು.ಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ನೀಡಲಾಗುತ್ತಿದ್ದು, ಇದು 3 ವರ್ಷದ ಕೋರ್ಸ್‍ನ್ನು ಹೊಂದಿದೆ. ಅಲ್ಲದೆ ಡಿಪ್ಲೊಮಾ ವಿದ್ಯಾರ್ಥಿಗಳಿಗೂ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಐ.ಟಿ. ವಲಯದಲ್ಲಿ ಕರಿಯರ್ ಮಾಡುವಂತಹ ವಿದ್ಯಾರ್ಥಿಗಳಿಗೆ ಈ ಕೋರ್ಸ್‍ನಿಂದ ಆರಂಭ ದೊರೆಯುವಂತಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ರಾಜಾ ಲಖಮನಗೌಡ ಸೈನ್ಸ್ ಇನ್ಸ್ಟಿಟ್ಯೂಟ
ಬೆಳಗಾವಿ, ಕರ್ನಾಟಕ
ದೂ.ಸಂ:0831-2420351, 2461928

ಗೋಗಟೆ ಇನ್ಸ್‍ಟ್ಯೂಟ್ ಆಫ್ ಟೆಕ್ನಾಲಾಜಿ (ಜಿ.ಐ.ಟಿ) - ಬೆಳಗಾವಿ:

ಪ್ರಸಿದ್ದ ಉದ್ಯಮಿ ಹಾಗೂ ಲೋಕೋಪಕಾರಿಯಾದ ದಿ|| ಶ್ರೀ ರಾವ್‍ಸಾಹೆಬ್ ಬಿ.ಎಂ. ಗೋಗಟೆ ಇವರ ಆರ್ಥಿಕ ಸಹಾಯ/ ದಾನ ದಿಂದ ಈ ಇನ್ಸ್ಟಿಟ್ಯೂಟ 1979 ರಲ್ಲಿ ಸ್ಥಾಪನೆಗೊಂಡಿತು.. ಈ ಕಾಲೇಜು ದೇಶದಲ್ಲಿ ಕೈಗಾರಿಕಾ ಉದ್ಯಮದಲ್ಲಿ ಅಭಿವೃದ್ಧಿಯನ್ನು ಕಾಣುವ ಸಂಬಂಧವಾಗಿ ಸ್ಥಾಪಿಸಲಾಗಿದ್ದು, ಮಾನವ ಸಂಪನ್ಮೂಲಕ್ಕೆ ತಾಂತ್ರಿಕ ತರಬೇತಿಯನ್ನು ನೀಡುವ ಕೆಲಸವನ್ನು ಇದು ನಿರ್ವಹಿಸುತ್ತಿದೆ. ಈ ಕಾಲೇಜು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಗೆ ಸಂಯೋಜನೆ ಹೊಂದಿದ್ದು, ಅಖಿಲ ಭಾರತ ತಾಂತ್ರಿಕ ಶಿಕ್ಷ ಣಮಂಡಳಿ, , ನವದೆಹಲಿ ಇವರಿಂದ ಮಾನ್ಯತೆ ಪಡೆದ ಮಹಾವಿದ್ಯಾಲಯವಾಗಿದೆ.

ಈ ಪೀಠವು ಉನ್ನತ ವ್ಯಾಸಂಗವನ್ನು ಹೊಂದಿದ ಹಾಗೂ ಪರಿಣಾಮಕಾರಿ ಪ್ರೇರಕ ಶಕ್ತಿ ಹೊಂದಿದ ಮತ್ತು ತಾಂತ್ರಿಕ ಸಂಶೋಧನೆಯನ್ನು ನಡೆಸುತ್ತಿರುವ ಉತ್ತಮ ಸಿಬ್ಬಂದಿ ಹಾಗೂ ಬೋಧಕ ವರ್ಗವನ್ನು ಹೊಂದಿರುತ್ತದೆ. ಇಲ್ಲಿನ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ವಿಭಾಗೆ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಎಂ.ಎಸ್.ಸಿ ವಿಭಾಗದಲ್ಲಿ ಸಂಶೋಧನೆ ಹಾಗೂ ಪಿ.ಎಚ್.ಡಿ. ಮಾಡುವ ಅವಕಾಶ ಇಲ್ಲಿ ಇರುತ್ತದೆ. 1980 ರಲ್ಲಿ 180 ಇದ್ದ ವಿಧ್ಯಾರ್ಥಿಗಳ ಸಂಖ್ಯೆ 2003-04 ಕ್ಕೆ 2359 ಕ್ಕೆ ಏರಿಕೆಯಾಗಿದೆ. ಈ ಸಂಸ್ಥೆಗೆ ಇತರೆ ಸರ್ಕಾರಿ ಸಂಘಗಳಿಂದ ಒಂದು ಕೋಟಿಗಿಂತಲೂ ಹೆಚ್ಚು ಅನುದಾನ ಸಂಗ್ರಹವಾಗುತ್ತದೆ.
ಇಲ್ಲಿನ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಮ್ಸ್, ಬಯೋಮಾಸ್ ಗ್ಯಾಸಿಫಿಕೇಶನ್, ಫ್ಲುಯಿಡೈಜ್ಬೆಡ್ ಬೆಡ್ ಕಂಬಷನ್, ಮೆಟಿರಿಯಲ್ ಟೆಸ್ಟಿಂಗ್‍ನಂತ ಶಾಖೆಗಳಿಗೆ ಸುಸಜ್ಜಿತ ಸಂಬಂಧಿತ ಸಲಕರೆಣೆಗಳನ್ನು ಹೊಂದಿರುವಂತಯೂ ಸಹ, ಸುಸಜ್ಜಿತ ಗ್ರಂಥಾಲಯವನ್ನು ಹೊಂದಿದೆ. ಇದು ಉದ್ಯಮಗಳೊಂದಿಗೆ ಪರಸ್ಪರ ಹೊಂದಾಣಿಕೆ ಮಾಡುವ ಕೇಂದ್ರವಾಗಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ತರಬೇತಿ ಹಾಗೂ ಉದ್ಯೋಗ್ ಕೋಶವನ್ನು ಹೊಂದಿದೆ. ಇಲ್ಲಿ ಆಗಾಗ್ಗೆ ಅಣಕು ಸಂದರ್ಶನ (ಮಾಕ್ ಇಂಟರವ್ಯೂ), ಗುಂಪು ಚರ್ಚೆ ಇತರೆ ತರಬೇತಿಗಳನ್ನು ನೀಡಲಾಗುತ್ತಿದೆ ಇದರಿಂದ ವಿದ್ಯಾರ್ಥಿಗಳ ಮನೋಬಲವನ್ನು ಹೆಚ್ಚಿಸುತ್ತದೆ.

ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಬ್ಲೂ-ಚಿಪ್-ಕಂಪನಿ ಹಾಗೂ ಇತರೆ ದೇಶ ಮತ್ತು ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಪ್ರಸಿದ್ದ ಕಂಪನಿಗಳಾದಂತಹ ಇನ್‍ಫೋಸಿಸ್, ವಿಪ್ರೋ ಇನ್ನಿತರೆ ಕಂಪನಿಗಳು ಕ್ಯಾಂಪ್‍ಸ್ ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಈ ಸಂಸ್ಥೆಗೆ ಭೇಟಿ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕರ್ನಾಟಕ ಲಾ ಸೊಸೈಟಿ
ಗೋಗ್ಟೆ ಕಾಮರ್ಸ್ ಕಾಲೇಜ್ ಕ್ಯಾಂಪಸ್
ಟಿಳಕವಾಡಿ, ಬೆಳಗಾವಿ. - 590 006
Karnataka (INDIA)
ದೊ.ಸಂ: +91-831- 2485554
ಫ್ಯಾಕ್ಸ . : +91-831-2485353
ವಿ.ಅಂಚೆ : kls[at]git[dot]ac[dot]in; kls[at]git[dot]edu

 

ಕೆ.ಎಲ್.ಇ ಯ ಡಾ. ಎಮ್.ಎಸ್.ಶೇಷಗಿರಿ ಕಾಲೇಜ್ ಆಫ್‍ ಇಂಜಿನಿಯರಿಂಗ್ & ಟೆಕ್ನಾಲಾಜಿ (ಬೆಳಗಾವಿ) :

ಡಾ. ಎಮ್.ಎಸ್.ಶೇಷಗಿರಿ ಕಾಲೇಜ್ ಆಫ್‍ ಇಂಜಿನಿಯರಿಂಗ್ & ತಾಂತ್ರಿಕ ಮಹಾವಿದ್ಯಾಲಯವು ಇದು ಪ್ರತಿಷ್ಟಿತ ಕೆ.ಎಲ್.ಇ ಸಂಸ್ಥೆಯ ಹೆಸರಾಂತ ಅಂಗಸಂಸ್ಥೆಯಾಗಿದ್ದು. ಕರ್ನಾಟಕದಲ್ಲಿಯೇ ಇದು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ. ಇದು 1979 ರಲ್ಲಿ ಸ್ಥಾಪನೆಗೊಂಡಿದ್ದು, ತಾಂತ್ರಿಕ ಶಿಕ್ಷಣದಲ್ಲಿ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿನ ಒಂದು ಭಾಗವಾಗಿದೆ. ಉದ್ಯಮಬಾಗನಂತಹ ಒಳ್ಳೆಯ ಸಕಲ ಸೌಕರ್ಯ ಹಾಗೂ ಸಂಪರ್ಕ ಹೊಂದಿರುವ ಸ್ಥಳದಲ್ಲಿ ಈ ಸಂಸ್ಥೆಯಿದ್ದು, 1999 ರಿಂದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತದೆ. ಈ ಕಾಲೇಜು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಗೆ ಸಂಯೋಜನೆ ಹೊಂದಿದ್ದು, ಅಖಿಲ ಭಾರತ ತಾಂತ್ರಿಕ ಶಿಕ್ಷ ಣಮಂಡಳಿ, , ನವದೆಹಲಿ ಇವರಿಂದ ಮಾನ್ಯತೆ ಪಡೆದ ಮಹಾವಿದ್ಯಾಲಯವಾಗಿದೆ.
ಈ ಕೆ.ಎಲ್.ಇ. ಮಹಾವಿದ್ಯಾಲಯದ ತಾಂತ್ರಿಕ ವಿಭಾಗದಲ್ಲಿ, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಂ.ಸಿ.ಎ, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಡಸ್ಟ್ರೀಯಲ್ & ಪ್ರೋಡಕ್ಷನ್ ಇಂಜಿನಿಯರಿಂಗ್, ಹಾಗೂ ಇನ್ನಿತರೆ ವಿವಿಧ ವಿಭಾಗಗಳನ್ನು ಹೊಂದಿದೆ. ಮಹಾವಿದ್ಯಾಲಯದಲ್ಲಿ 100 ಕ್ಕಿಂತಲು ಹೆಚ್ಚಿನ ಪರಿಣತೆ ಹೊಂದಿದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇರುತ್ತಾರೆ.

ಇದರ ಹೊರತಾಗಿ ಕಾಲೇಜು ಪಕ್ಕದಲ್ಲಿಯೇ ಒಳ್ಳೆಯ ಸುಸಜ್ಜಿತ ಹಾಸ್ಟೆಲ್‍ಗಳು, ಕಂಪ್ಯೂಟರ್ ಲ್ಯಾಬ್, ಕ್ಯಾಂಟೀನ್, ಜಿಮ್ನಾನಿಜಮ್, ಇನ್ನಿತರೆ ಎಲ್ಲ ಸೌಕರ್ಯಗಳನ್ನು ಹೊಂದಿದೆ. ಅಲ್ಲದೆ ವಿದ್ಯಾರ್ಥಿಗಳಲ್ಲಿ ಸಾಂಸ್ಕøತಿಕ ಚಟುವಟಿಕೆಗಳಿಗೂ ಸಹ ಅಷ್ಟೇ ಪ್ರಾಧಾನ್ಯ ನೀಡಲಾಗುತ್ತಿದೆ. “ GENESIS” ಎಂಬ ಕಾಲೇಜ್ ಮ್ಯಾಗ್‍ಜಿನ್ ನಲ್ಲಿ ಇದರ ಎಲ್ಲ ಮಾಹಿತಿ ಪಡೆಯಬಹುದಾಗಿದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಬುದ್ದಿಶಕ್ತಿಯನ್ನು ಹೊರತರುವುದೇ ಇದರ ಮುಖ್ಯ ಉದ್ದೇಶ. ಈ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅವರ ವೃತ್ತಿ ಜೀವನದಲ್ಲಿ ಇರುವ ಇಚ್ಛೆಯನ್ನು ಪೂರೈಸುವುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಕೆ.ಎಲ್.ಇ. ಸೊಸೈಟಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಾಜಿ
ಉದ್ಯಮಬಾಗ, ಬೆಳಗಾವಿ - 590008
ಕರ್ನಾಟಕ,
ದೂ.ಸಂ – 0831-2440322
ಫ್ಯಾಕ್ಸ: 091 - 831 - 2441644
ವಿ.ಅಂಚೆ: kleprinc[at]yahoo[dot]com
ವೆಬ್ಸೈಟ್: www[dot]klescet[dot]org, www[dot]klescet[dot]ac[dot]in

 

ಎಸ್.ಕೆ.ಇ ಸಂಸ್ಥೆಯ ಗೋವಿಂದರಾಮ ಸಕ್ಸೇರಿಯಾ ಕಂಪ್ಯೂಟರ ಅಪ್ಪ್ಲಿಕೇಶನ್ ಮಹಾವಿದ್ಯಾಲಯ, ಟಿಳಕವಾಡಿ ಬೆಳಗಾವಿ

gssbca

ಸೌಥ್ ಕೊಂಕಣ ಶಿಕ್ಷಣ ಸಂಸ್ಥೆ ಇದು 1944 ರಲ್ಲಿ ಸ್ಥಾಪನೆಗೊಂಡಿದ್ದು, 1945 ರಲ್ಲಿ ಈ ಸಂಸ್ಥೆಯು ರಾಣಿ ಪಾರ್ವತಿ ದೇವಿ (ಆರ್.ಪಿ.ಡಿ) ಕಾಲೇಜ್ ಎಂಬ ತನ್ನ ಪ್ರಥಮ ಶಿಕ್ಷಣ ಮಹಾವಿದ್ಯಾಲಯವನ್ನು ಪ್ರಾರಂಭಿಸಿತು. ಪ್ರಸ್ತುತ ಆರ್.ಪಿ.ಡಿ. ಕಾಲೇಜ್ ಇದು 30 ಎಕರೆಯಷ್ಟು ತನ್ನ ಕ್ಯಾಂಪಸ್ ಅನ್ನು ಹೊಂದಿದ್ದು, ಬೆಳಗಾವಿಯಲ್ಲಿ 12 ವಿವಿಧ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಇಲ್ಲಿ ಬಿ.ಸಿ.ಎ. ಕೋರ್ಸ್ ಗೆ ಅವಕಾಶವಿದ್ದು, ಇದು 3 ವರ್ಷದ ಕೋರ್ಸ್ ಆಗಿದೆ. ಈ ಕಾಲೇಜನಲ್ಲಿ ಹೈಟೆಕ್ ವರ್ಗ ಕೊಠಡಿಗಳಿದ್ದು, ಹೈಟೆಕ್ ಕಂಪ್ಯೂಟರ್ -ಲ್ಯಾಬ್‍ನ್ನು ಹೊಂದಿದೆ. 24 ಗಂಟೆಯ ಕಂಪ್ಯೂಟರ್ ಇಂಟರ್‍ನೆಟ್ ಬ್ರಾಡ್ ಬ್ಯಾಂಡ್ ಸೌಲಭ್ಯವನ್ನು ಹೊಂದಿದೆ. ಹಾಸ್ಟೆಲ್‍ಗಳನ್ನು ಹೊಂದಿದೆ. ದೊಡ್ಡದಾದ ಗ್ರಂಥಾಲಯ ಹಾಗೂ ಆಟದ ಮೈದಾನವನ್ನು ಹೊಂದಿದೆ. ಕರಿಯರ್ ಮಾರ್ಗದರ್ಶಿ ಹಾಗೂ ಉದ್ಯೋಗ ಸೆಲ್ ನವರು ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶಗಳನ್ನು ಹಾಗೂ ಕಂಪನಿಗಳನ್ನು ಕ್ಯಾಂಪಸ್ ಆಯ್ಕೆಗೆ ಕರೆಯುವ ಅವಕಾಶವನ್ನು ಹೊಂದಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ನಿರ್ದೇಶಕರು, ಗೋವಿಂದರಾಮ ಸಕ್‍ಸರಿಯಾ ಕಾಲೇಜ್ ಆಫ್ ಕಂಪ್ಯೂಟರ್ ಆಪ್ಲಿಕೇಶನ್ ,

ಟಿಳಕವಾಡಿ, ಬೆಳಗಾವಿ-590006
ದೂ.ಸಂ :0831-4216649   ಫ್ಯಾಕ್ಸ :0831-2485910 ವಿ.ಅಂಚೆ– gssbca[at]gmail[dot]com

 

Best Viewed in latest version of firefox,chrome, Internet Explorer 9 or above with resolution 1024x768.